ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್ ಅವರು ಇಂದು ಆಯೋಜಿಸಿದ್ದ ಅಫ್ಘಾನಿಸ್ತಾನದ ಕುರಿತಾದ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಏಳು ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಮಂಡಳಿಗಳ ಮುಖ್ಯಸ್ಥರು ಸಂವಾದದ ಬಳಿಕ ಒಟ್ಟಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಇರಾನ್, ಕಜ಼ಕಿಸ್ತಾನ, ಕರ್ಗಿಸ್ತಾನ, ರಷ್ಯಾ, ತಜ಼ಕಿಸ್ತಾನ್, ತುರ್ಕ್ಮೇನಿಸ್ತಾನ ಮತ್ತು ಉಜ್ಬೇ಼ಕಿಸ್ತಾನ ರಾಷ್ಟ್ರಗಳನ್ನು ಪ್ರತಿನಿಧಿಸುವ ಹಿರಿಯ ಭದ್ರತಾ ಅಧಿಕಾರಿಗಳು ಪ್ರಧಾನಮಂತ್ರಿ ಅವರಲ್ಲಿ, ಸಂವಾದವನ್ನು ಆಯೋಜಿಸಿದ ಭಾರತದ ಉಪಕ್ರಮ ಮತ್ತು ವಿನಿಮಯದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಆಫ್ಗನ್ ಪರಿಸ್ಥಿತಿಯ ಬಗ್ಗೆ ತಮ್ಮ ದೇಶಗಳ ಅನಿಸಿಕೆಗಳನ್ನು ಹಂಚಿಕೊಂಡರು.
ಸಾಂಕ್ರಾಮಿಕದ ನಡುವೆಯೂ ದೆಹಲಿ ಭದ್ರತಾ ಸಂವಾದದಲ್ಲಿ ಹಿರಿಯ ಗಣ್ಯರು ಭಾಗವಹಿಸಿದ್ದಕ್ಕಾಗಿ ಪ್ರಧಾನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನದ ಸದ್ಯದ ಸ್ಥಿತಿಯ ಹಿನ್ನೆಲೆಯಲ್ಲಿ ಆ ಪ್ರದೇಶದ ದೇಶಗಳು ಗಮನಹರಿಸಬೇಕಾದ ನಾಲ್ಕು ಅಂಶಗಳ ಬಗ್ಗೆ ಅವರು ಒತ್ತಿ ಹೇಳಿದರು, ಅವುಗಳೆಂದರೆ, ಎಲ್ಲವನ್ನೂ ಒಳಗೊಂಡ ಸರ್ಕಾರದ ಅಗತ್ಯ, ಭಯೋತ್ಪಾದಕ ಗುಂಪುಗಳು ಆಫ್ಘನ್ ಭೂ ಪ್ರದೇಶ ಬಳಕೆ ಬಗ್ಗೆ ಶೂನ್ಯ ಸಂಯಮ, ಆಫ್ಘಾನಿಸ್ತಾನದಿಂದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಣೆ ತಂತ್ರ ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ನಿರ್ಣಾಯಕ ಮಾನವೀಯ ಬಿಕ್ಕಟ್ಟು ಪರಿಹರಿಸುವುದು.
ಪ್ರಾದೇಶಿಕ ಭದ್ರತಾ ಸಂವಾದವು ಮಧ್ಯ ಏಷ್ಯಾದ ಮಿತವಾದ ಮತ್ತು ಪ್ರಗತಿಶೀಲ ಸಂಸ್ಕೃತಿಯ ಸಂಪ್ರದಾಯಗಳನ್ನು ಪುನರುಜ್ಜೀವಗೊಳಿಸಲು ಮತ್ತು ಭಯೋತ್ಪಾದನಾ ಪ್ರವೃತ್ತಿಯನ್ನು ಕೆಲಸ ಮಾಡುತ್ತದೆ ಎಂಬ ಭರವಸೆಯನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.